if unable to read kannada words please install this kannada nudi software : click here

If unable to read kannada words please install this kannada nudi software : click here

ಶಾಸನಗಳು



ಹಲ್ಮಿಡಿ ಶಾಸನ
                                      Click here to download this file
ಹಲ್ಮಿಡಿ ಕರ್ನಾಟಕ ಹಾಸನ ಜಿಲ್ಲೆಯ ಒಂದು ಹಳ್ಳಿ. ಕನ್ನಡ ಭಾಷೆಯಲ್ಲಿರುವ ಅತ್ಯಂತ ಹಳೆಯ ಶಾಸನ ಶಿಲ್ಪ ಇಲ್ಲಿ ದೊರೆತಿದೆ. ಕ್ರಿ.ಶ. ೪೫೦ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ.ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ.ಇದು ಕದಂಬರ ಕಾಕುತ್ಸ ವರ್ಮನ ಕಾಲದ್ದು.ಈ ಶಾಸನ ಆಗಿನ ಕಾಲದ ಕನ್ನಡ ಭಾಷೆಯ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.
ಈ ಶಾಸನದ ಪ್ರಾರ್ಥನಾಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ ಸಂಸ್ಕೃತ ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ.ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ ಎರಿದು, ಕೊಟ್ಟಾರ್, ಅದಾನ್ ಮೊದಲಾದ ಪದಗಳು, ಇದರ ಭಾಷೆ "ಪೂರ್ವದ ಹಳೆಗನ್ನಡ" ಎಂಬುದನ್ನು ಸೂಚಿಸುತ್ತವೆ.
***************


Click here to download this file


ಕಪ್ಪೆ ಅರಭಟ್ಟನ ಶಾಸನ
ಕಪ್ಪೆ ಅರೆಭಟ್ಟ ೭ನೇ ಶತಮಾನದ ಒಬ್ಬ ಚಾಲುಕ್ಯ ಯೋಧ. ಇತನ ಬಗ್ಗೆ ಬಾದಾಮಿಯ ಒಂದು ಬಂಡೆಗಲ್ಲಿನ ಮೇಲೆ ರಚಿತವಾದ ಶಾಸನ ಐತಿಹಾಸಿಕ ಮೌಲ್ಯವನ್ನು ಹೊಂದಿದೆ. ಅರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ಈ ಶಾಸನದಲ್ಲಿ ದೊರೆ ಯುತ್ತವೆ. ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿ ರಚಿತವಾಗಿದೆ. ಈ ಶಾಸನ ಕಪ್ಪೆ ಅರಭಟ್ಟನ ಬಗ್ಗೆ ರಚಿತವಾಗಿರುವುದರಿಂದ ಅವನ ಹೆಸರಿನಿಂದಲೇ ಈ ಶಾಸನವನ್ನು ಗುರುತಿಸುತ್ತಾರೆ. ಈ ಶಾಸನದಲ್ಲಿ ಕನ್ನಡದ ಮೊಟ್ಟಮೂದಲ ತ್ರಿಪದಿಗಳು ದೊರೆಯುತ್ತವೆ.
ಈ ಶಾಸನದ ಕೆಲವು ತ್ರಿಪದಿಯನ್ನು ನೋಡುವುದಾದರೆ ಸಾಧುಗೆ ಸಾಧು ಮಾಧುರ್ಯಂಗೆ ಮಾಧುರ್ಯಂ ಭಾದಿಪ್ಪ ಕಲಿಗೆ ಕಲಿಯುಗ ವಿಪರೀತನ್ಮಾಧವನೀತನ್ಪೆರನಲ್ಲ||
ಶಾಸನದ ಪಠ್ಯ
"ಕಪ್ಪೆ ಅರಭಟ್ಟನ್ ಶಿಷ್ಟಜನಪ್ರಿಯನ್, ಕಷ್ಟಜನವರ್ಜಿತನ್, ಕಲಿಯುಗ ವಿಪರೀತನ್, ವರನ್ತೇಜಸ್ವಿನೋ ಮೃತ್ತ್ಯರ್‍ನತು ಮಾನಾವಖಣ್ಡನಂ ಮೃತ್ತ್ಯುಸ್ತತ್ಕ್ಷಣಿಕೋ ದುಃಖಮ್ ಮಾನಭಂಗನ್, ದಿನೇ,ದಿನೇ ಸಾಧುಗೆ ಸಾಧು ಮಾಧೂರ್ಯ್ಯಂಗೆ ಮಾಧೂರ್ಯ್ಯಂ ಬಾಧಿಪ್ಪ ಕಲಿಗೆ ವಿಪರೀತನ್ ಮಾಧವನೀತನ್ ಪೆರನಲ್ಲ ಒಳ್ಳಿತ್ತ ಕೆಯ್ವೊರ್ ಆರ್ ಪ್ಪೊಲ್ಲದುಮ್ ಅದರನ್ತೆ ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತಂ ಇಲ್ಲಿ ಸನ್ಧಿಕ್ಕುಂ ಅದು ಬಂದು ಕಟ್ಟಿದ ಸಿಂಘಮನ್ ಕೆಟ್ಟೊದ್ ಎಮಗೆನ್ದು ಬಿಟ್ಟವೊಲ್ ಕಲಿಗೆ ವಿಪರೀತ ಅಹಿತರ್ಕ್ಕಳ್ ಕೆಟ್ಟರ್ ಮೇಣ್ ಸತ್ತರ್ ಅವಿಚಾರಮ್
ವಿವರಣೆ: ಕಪ್ಪೆ ಅರೆಭಟ್ಟನು ಜನಾನುರಾಯಾಗಿ, ಜನರ ಕಷ್ಟಕಾಲದಲ್ಲಿ ನೆರವಾಗುತ್ತಿದ್ದನು. ಆಪದ್ಭಾಂದವನಂತಿದ್ದ ಈತ ಒಳ್ಳೆಯವರಿಗೆ ಒಳ್ಳೆಯವನಾಗಿ, ಆತ್ಮೀಯರಿಗೆ ಪ್ರೀತಿಪಾತ್ರನಾದವನಾಗಿ, ತೊಂದರೆ ಕೊಡುವವರಿಗೆ ಸಿಂಹಸ್ವಪ್ನವಾಗಿದ್ದನು. ಮಹಾಭಾರತದಲ್ಲಿ ಕೃಷ್ಠ ಹೇಗೆ ದುಷ್ಟ ಶಿಕ್ಷೆ, ಶಿಷ್ಟ ರಕ್ಷೆ ಮಾಡಿದ್ದನೋ ಆ ರೀತಿಯಲ್ಲಿ ಈತನಿದ್ದನು.




No comments: